Wednesday 2 October 2013

ಸಾಂಖ್ಯ ಯೋಗ - ಆತ್ಮ ಸ್ವರೂಪ


ಅರ್ಜುನನ ಗೋಳಾಟ ಕೇಳಿ ಶ್ರೀ ಕೃಷ್ಣನು ಸಾಕು ಮಾರಾಯ ಏನು ಚಿಕ್ಕ ಮಕ್ಕಳ ತರ ಅಳುತ್ತೀಯ, ಈ ದೌರ್ಬಲ್ಯ ಬಿಟ್ಟು ಎದ್ದೇಳು ಯುದ್ಧ ಮಾಡು ಅಂದಾಗ ಅರ್ಜುನ ಅವನ ನಿಜವಾದ ಕಾರಣ ಕೊಡ್ತಾನೆ. ಮೊದಲನೇ ಅಧ್ಯಾಯದಲ್ಲಿ ಸುಮ್ನೇ ಯುದ್ದ ಆದ್ರೆ ಎಲ್ಲರೂ ಸತ್ತೋಗ್ತಾರೆ, ವರ್ಣ ಸಂಕರ ಆಗುತ್ತೆ, ಕುಲ ಸ್ತ್ರೀಯರು ಹಾಳಾಗ್ತಾರೆ, ಇನ್ನೊಂದ್ ಆಗುತ್ತೆ ಮತ್ತೊಂದ್ ಆಗುತ್ತೆ ಅಂತ ಹೇಳಿದ್ದೆಲ್ಲಾ, ಯುದ್ದ ಮಾಡೋಕೆ ಇಷ್ಟ ಇಲ್ಲ ಕಣೋ, ಬೇಡ ಪ್ಲೀಸ್ ಅಂತ ಹೇಳೋಕೆ ಮಾಡಿದ ಗಿಮಿಕ್ ! ಅದಕ್ಕೇ ಕೃಷ್ಣ  ಪ್ರಶ್ನೆಗಳ ಸರಮಾಲೆಗಳಿಗೆ ಉತ್ತರ ಹೇಳಿಲ್ಲ ! ಏನಿದು ಇಲ್ಲ ಸಲ್ಲದ ವಾದ ಮಾಡ್ತೀಯಾ ಸುಮ್ನೇ ಯುದ್ಧ ಮಾಡು ಅಂತ ಹೇಳಿದ್ದಕ್ಕೆ, ಈಗ ಅವನಿಗೆ ಮನಸ್ಸಲ್ಲಿ ಕಾಣುತ್ತಿದ್ದ ಆ ಭಯ ಏನು ಅಂತ ಹೇಳ್ತಾನೆ.

"ಪೂಜಾರ್ಹರಾದ ದ್ರೋಣ, ಭೀಷ್ಮ ಇವರನ್ನೆಲ್ಲಾ ಹೇಗೆ ಬಾಣ ಬಿಟ್ಟು ಸಾಯಿಸಲಿ? ಇವರನ್ನೆಲ್ಲಾ ಸಾಯಿಸಿ ನಾವು ಪಡೆದ ಸಂಪತ್ತಿಗೆ ಏನು ಬೆಲೆ? ಹೀಗೆ ಮಾಡಿದರೆ ನಾವು ಮಾಡುವ ಊಟಕ್ಕೆ ರಕ್ತ ಮೆತ್ತಿಕೊಂಡಿರುವುದಿಲ್ಲವೇ? ಅದೂ ಅಲ್ಲದೇ ಯುದ್ಧ ಮಾಡಿ ಗೆದ್ದೇ ಗೆಲ್ಲುತ್ತೇವೆ ಅಂತ ಏನು ಹೇಳೋಕಾಗಲ್ಲ, ಅಯ್ಯೋ ಸಿಕ್ಕಾಪಟ್ಟೆ Confusion ಆಗ್ತಿದೆ ಮಾರಾಯ ನೀನೆ ಏನಾದ್ರೂ ಒಂದು Solution ಕೊಡು, ನೀನು ಹೇಳಿದ್ದನ್ನ ಮಾಡ್ತೀನಿ, ನಿನ್ನ ಶಿಷ್ಯ ನಾನು, ನಾನು ಈಗ ಏನು ಮಾಡಿದ್ರೆ ನನಗೆ ಶ್ರೇಯಸ್ಸು ಉಂಟಾಗುತ್ತೋ ಅದನ್ನು ನಿಶ್ಚಯವಾಗಿ ಹೇಳು" ಅಂತ ಹೇಳಿ ನಾನು ಯುದ್ದ ಮಾಡಲ್ಲ ಅಂತ ಕೂತ್ಕೊಂಡ್ ಬಿಡ್ತಾನೆ !

ಇಲ್ಲೊಂದು ತಮಾಷೆ ಏನಂದ್ರೆ, ನನ್ನ ಬುದ್ದಿಗೆ ಏನೂ ಗೊತ್ತಾಗ್ತಿಲ್ಲ ನೀನೇ ಹೇಳು ಅಂದಮೇಲೆ, ಆದ್ರೂ ನಾನು ಯುದ್ಧ ಮಾಲ್ಲ ಅಂತ ಅವನು ನಿರ್ಧಾರ ಮಾಡಿಬಿಟ್ಟಿದ್ದಾನೆ ! ಇದು ನಮ್ಮ ವಿಚಾರದಲ್ಲೂ ಅಷ್ಟೇ, ನಾವು ಇನ್ನೊಬ್ಬರ ಹತ್ತಿರ ಏನಾದ್ರೂ ಹೇಳಿ ಮಾರಾಯ್ರೆ ಏನು ಮಾಡಬೇಕು ಅಂತಾನೆ ಗೊತ್ತಾಗ್ತಿಲ್ಲ ಅಂತ ಹೇಳ್ತಿರ್ತೀವಿ ಆದ್ರೂ ನಮ್ಮ ಮನಸ್ಸಲ್ಲಿ ಒಂದು Plan ಇರುತ್ತೆ ಏನು ಮಾಡ್ಬೇಕು ಅಂತ. ಸಮಸ್ಯೆ ಏನು ಅಂದ್ರೆ ನಮ್ಮ ವಿಚಾರ ಸರಿಯಾಗಿಲ್ಲದಿದ್ದ ಪಕ್ಷದಲ್ಲಿ, ಅದು ಯಾಕೆ ಸರಿಯಾಗಿಲ್ಲ ಅಂತ ತಿಳಿಸೋರು ಮಾತ್ರ ತುಂಬಾ ಕಷ್ಟ ಪಟ್ಟು ನಮ್ಮನ್ನ ತಿದ್ದಬೇಕು. ಅದ್ರಲ್ಲೂ ನಾವು ಮಹಾ ಬುದ್ದಿವಂತರು ಅನ್ನೋ ಭ್ರಮೆಗೆ ಒಳಗಾಗಿದ್ರಂತೂ ಮುಗೀತು ಇನ್ನೂ ಕಷ್ಟ. ಶ್ರೀಕೃಷ್ಣನಿಗೆ ಅಲ್ಲಿ ಆಗಿದ್ದೂ ಇದೇ !

ಆದರೆ ಕೃಷ್ಣ ಮಹಾ ಜ್ಞಾನಿ ಹಾಗಾಗಿ ಅವನಿಗೆ ಇದೇನು ಕಷ್ಟವಾಗಲಿಲ್ಲ. ಅವನಿಗೆ ಇವನ ಮೂಲಭೂತ ಸಮಸ್ಯೆ ತಕ್ಷಣ ಗೊತ್ತಾಯ್ತು. ಅದ್ಕೆ ಹೇಳ್ತಾನೆ, "ಯಾಕಪ್ಪಾ ಸುಮ್ನೇ ಅಳ್ತೀಯ, ಎಲ್ಲಾ ಗೊತ್ತಿರೋರ್ ತರ ಮಾತಾಡ್ತೀಯ, ಇರೋರಿಗೆ ಸಾಯೋರಿಗೆ ಬುದ್ದಿವಂತರು ಅಳೊದಿಲ್ಲ" ಈಗೇನು? ಆವ್ರು ಸಾಯ್ತರೆ ಅಂತ ತಾನೇ, ನಾನು ಇರ್ಲಿಲ್ಲ ಅನ್ನೋದೇ ಇರ್ಲಿಲ್ಲ, ನೀನೂ ಇರ್ಲಿಲ್ಲ ಅನ್ನೋದೂ ಇರ್ಲಿಲ್ಲ, ಇಲ್ಲಿರೋರು ಎಲ್ಲರೂ ಅಷ್ಟೇ ಇರ್ಲಿಲ್ಲ ಅನ್ನೋ ಕಾಲವೇ ಇರ್ಲಿಲ್ಲ. ಅಂತ ಹೇಳಿ ದೇಹ-ದೇಹೀ ಸಂಬಂಧದ ಬಗ್ಗೆ ಹೇಳ್ತಾನೆ. ಶರೀರ ಹೇಗೂ ಹಾಳಾಗೋದೇ ಹೌದು, ಆತ್ಮ ಅನ್ನೋದು ಹೇಗೂ ಹಾಳಾಗೋದೇ ಇಲ್ಲ. ಆತ್ಮಕ್ಕೆ ಶರೀರ ಒಂದು ಬಟ್ಟೆ ಅಷ್ಟೇ, ನಾವು ಹೇಗೆ ಬಟ್ಟೆ ಹಾಳಾದ್ಮೆಲೆ ಬಿಸಾಕ್ತೀವೋ ಹೊಸ ಬಟ್ಟೆ ಹಾಕೊಳ್ತೀವೋ ಆತ್ಮಕ್ಕೂ ಅಷ್ಟೇ ಈ ದೇಹ ಹೋದ್ರೆ ಇನ್ನೊಂದ್ ದೇಹ ಸಿಗತ್ತೆ! ಹಾಗಾಗಿ ಈ ಆತ್ಮವು ಅವಿನಾಶಿ ಅನ್ನೋದು ಮೊದಲು ತಿಳ್ಕೋ ಅಂತ ಹೇಳ್ತಾನೆ. ಆಮೇಲೆ ಅದನ್ನೇ ಮತ್ತೆ ಬೇರೆ ಬೇರೆ ತರ ಸುಮಾರ್ ಸರ್ತಿ ಹೇಳ್ತಾನೆ...

Time To Analyze.. ಯಾಕೆ ಕೃಷ್ಣ ಯುದ್ಧ ಮಾಡು ಅಂತ ನೇರವಾಗಿ ಹೇಳದೇ ಆತ್ಮ ಅವಿನಾಶಿ ಅನ್ನೋದನ್ನ ಒತ್ತುಕೊಟ್ಟು ಹೇಳ್ದ?
ಜೀವನದಲ್ಲಿ ಮುಖ್ಯವಾದ ಶತ್ರು ಅಂದ್ರೆ ಭಯ. ದುಃಖವೂ ಕೂಡ ಭಯದ ಅಪರ ಸ್ವರೂಪ. ಈ ಭಯಗಳಲ್ಲೆಲ್ಲಾ ಮುಖ್ಯವಾದ ಭಯ ಅಂದ್ರೆ ಜೀವಭಯ. ಹೇಗೆ ಅಂದ್ರೆ ನಮಗೆ ಯಾಕೆ ಭಯ ಉಂಟಾಗುತ್ತೆ ಅನ್ನೋದು ನೋಡಿದ್ರೆ ಅದು ಸ್ಪಷ್ಟವಾಗಿ ಗೊತ್ತಾಗುತ್ತೆ. ಭಯ ಉಂಟಾಗಲು ಮೂಲ ಕಾರಣ ನಾವು ಪ್ರೀತಿಸುವ ವಸ್ತು/ವ್ಯಕ್ತಿ ನಮ್ಮಿಂದ ದೂರ ಆಗ್ತಾರೆ ಅಂತ. ನೀವೇ ಸ್ವಲ್ಪ ಯೋಚನೆ ಮಾಡಿ, ನಾನು ಪ್ರೀತಿಸಿದ ಹುಡುಗಿಗೆ Propose ಮಾಡೋಕೆ ನನಗೆ ಭಯ ! ಯಾಕೆ? ಎಲ್ಲಿ ಅವಳು ನನ್ನಿಂದ ದೂರ ಆಗ್ತಾಳೋ ಅಂತ. Manager ಕಂಡ್ರೆ ಭಯ ಎಲ್ಲಿ ನನ್ನ ಕೆಲಸ ಹೋಗುತ್ತೋ, Increment ಹಾಳು ಮಾಡಿ ಹಾಕ್ತಾರೋ ಅಂತ ! ಹೀಗೆ ಪ್ರತಿಯೊಂದು ಭಯದ ಹಿಂದೆ ನಾವು ಪ್ರೀತಿಸಿರುವ ವಸ್ತುವನ್ನು ಆಗಲುತ್ತೇವೆ ಎಂಬ ಭಾವ ಇರುತ್ತದೆ.

ಸರಿ, ನಾವು ಅತ್ಯಂತ ಪ್ರೀತಿ ಮಾಡುವುದು ಯಾರನ್ನ? ನಮ್ಮನ್ನೇ !!! ಉಪನಿಷತ್ತಿನಲ್ಲಿ ಒಂದು ಮಾತಿದೆ, "ನವಾ ರೇ ಜಾಯ ಪ್ರಿಯಂ ಭವತಿ, ಆತ್ಮನಸ್ತು ಕಾಮಯ ಜಾಯ ಪ್ರಿಯಂ ಭವತಿ ! ನವಾ ರೇ ಪುತ್ರಾಃ ಪ್ರಿಯಂ ಭವತಿ ಆತ್ಮನಸ್ತು ಕಾಮಯ ಪುತ್ರಾ ಪ್ರಿಯಂ ಭವತಿ ! ... " ಹೀಗೆ ಸಾಗುತ್ತದೆ ಅಂದರೆ ನನಗೆ ಹೆಂಡತಿ ಇಷ್ಟ, ಯಾಕೆ ? ಅವಳು ನನ್ನ ಹೆಂಡತಿ ಅದಕ್ಕೆ, ಮಕ್ಕಳು ಇಷ್ಟ ಯಾಕೆ ನನ್ನ ಮಕ್ಕಳು ಅದಕ್ಕೆ. ಅಂದರೆ ನನಗೆ ಎಲ್ಲರೂ ಪ್ರಿಯರೇ ಆದರೆ ಅವರೆಲ್ಲ ನನ್ನ 'ನಾನು'ವಿನ ಸಂಪರ್ಕದಿಂದ ಪ್ರಿಯರಾಗಿದ್ದಾರೆಯೇ ಹೊರತು ಸ್ವತಂತ್ರವಾಗಿ ಅಲ್ಲ. ಇದು ಎಲ್ಲಿಯವರೆಗೆ ಅಂದರೆ ಬ್ರಹ್ಮ ಕೂಡ ಹೊರತಲ್ಲ, ನನಗೋಸ್ಕರ ಬ್ರಹ್ಮ ಇಷ್ಟ ಅನ್ನೋದು ಬಿಟ್ರೆ ಬ್ರಹ್ಮನಿಗೋಸ್ಕರ ಬ್ರಹ್ಮ ಇಷ್ಟ ಅಂತ ಅಲ್ಲ! ಎಂತಹ ಸತ್ಯ ಅಲ್ವಾ ಇದು, ಹಾಗಾಗಿ ನನಗೆ ನಾನೇ ಪ್ರಿಯ. So ಜೀವಭಯ ಅಂದರೆ ನಾನು ಎಲ್ಲಿ ನನ್ನಿಂದ ದೂರ ಆಗಿ ಬಿಡ್ತೀನೋ ಅನ್ನೋ ಭಯ !!

ಇದು ನೋಡಿ ಮಜಾ ಇದೆ. ನಾನು ಎಲ್ಲಿ ನನ್ನಿಂದ ದೂರ ಆಗ್ತೀನೋ ಅಂತ ಯೋಚನೆ ಬಂದು ಭಯ ಆಗುತ್ತೆ ಅಂತ ಅಂದ್ರೆ ನಾನು ನನ್ನ ದೇಹ ಅಂತ ನನ್ನ ಮನಸ್ಸು ಯೋಚಿಸಿದೆ! ಆದರೆ ನಿಜವಾದ 'ನಾನು' ದೇಹ ಅಲ್ಲ, ಆತ್ಮ ! ಆತ್ಮಕ್ಕೆ ಸಾವಿಲ್ಲ.. ಹಾಗಾಗಿ ನನಗೂ ಸಾವಿಲ್ಲ!! ಅಂದರೆ ನಾವು ಇದನ್ನು ಸಿದ್ದಿಪಡಿಸಿಕೊಂಡರೆ,  ವಿಷಯವನ್ನು ಬರೀ ಬುದ್ದಿಯ ಮಟ್ಟದಲ್ಲಿ ಅಷ್ಟೇ ಗ್ರಹಿಸದೇ ಅನುಭವದಿಂದ ಕಂಡುಕೊಂಡರೆ (ಅಂದರೆ ಸಾಯುವುದಲ್ಲ!! ) ಅಲ್ಲಿಗೆ ನಾವು ಜೀವನದ ಅತೀ ದೊಡ್ಡ ಭಯದಿಂದ ಮುಕ್ತರಾಗುತ್ತೇವೆ ! ಭಯ ಇಲ್ಲದವನನನ್ನು ಹಿಡಿಯಲು ಆಗುವುದಿಲ್ಲ !! ಏನು ಬೇಕಾದರೂ ಸಾಧಿಸಬಹುದು. ಅದಕ್ಕೆ ಆತ್ಮ ಜ್ಞಾನ ಮುಖ್ಯ, ಹಾಗಾಗಿಯೇ ಪದೇ ಪದೇ ಆತ್ಮಕ್ಕೆ ಸಾವಿಲ್ಲ, ಅವಿನಾಶಿ ಅಂತ ಸಾರಿ ಸಾರಿ ಹೇಳಿರುವುದು.

ಸಾಯದೇ ನಾನು ದೇಹವಲ್ಲ ಆತ್ಮ ಅಂತ ಕಂಡುಹಿಡಿದುಕೊಳ್ಳುವುದು ಹೇಗೆ ? ಸರಿ ಬಿಡಿ, ಆಮೇಲೆ ನೋಡೋಣ !! :D

1 comment:

  1. RNM V2K ನಿಂದ ನಿಮ್ಮನ್ನು ರಕ್ಷಿಸಲು ನಮ್ಮ ಲ್ಯಾಬ್ ಯಶಸ್ವಿ ಪರಿಹಾರವನ್ನು ಹೊಂದಿದೆ. ವೈಯಕ್ತಿಕ RNM & V2K EMF ಜಾಮರ್ (ಅಥವಾ ವೈಯಕ್ತಿಕ ಸಿಗ್ನಲ್ ಜ್ಯಾಮರ್): EM ಆಯುಧಗಳು ಮತ್ತು EM ಕಿರುಕುಳ ನೀಡುವ ಸಾಧನಗಳು (ಮತ್ತು ರೇಡಿಯೊನಿಕ್ಸ್), EM ಜಾಮರ್‌ಗಳು ಮತ್ತು EM ಜಾಪರ್‌ಗಳಂತಹ ನಮ್ಮ ಅಂಗಡಿಯ ವ್ಯಾಪಕ ಸಂಶೋಧನೆಗಳು. "ಸಿಗ್ನಲ್ ಜಾಮರ್" ಅನ್ನು ಸಹ ಹೀಗೆ ಉಲ್ಲೇಖಿಸಲಾಗಿದೆ: ಸಿಗ್ನಲ್ ಜಾಪರ್ , ಸಿಗ್ನಲ್ ಬ್ಲಾಕರ್, ಸಿಗ್ನಲ್ ಸ್ಕ್ರಾಂಬ್ಲರ್, ಸಿಗ್ನಲ್ ಕ್ರ್ಯಾಮರ್, ಸಿಗ್ನಲ್ ಅಬ್ಸ್ಟ್ರಕ್ಟರ್, ಸಿಗ್ನಲ್ ಸ್ಕ್ವಾಷರ್, ಸಿಗ್ನಲ್ ಡಿಸ್ಟ್ರಾಯರ್, ಸಿಗ್ನಲ್ ಡಿಆಕ್ಟಿವೇಟರ್.TEMFJ- ಮಾದರಿಯ ಸಾಧನಗಳು, ನಾವು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಎಲ್ಲಾ RF ಟ್ರಾನ್ಸ್‌ಮಿಟಿಂಗ್ ಸಾಧನಗಳಂತೆ, ನಮ್ಮ ನೀತಿಗಳ ವೆಬ್‌ಪುಟದಲ್ಲಿ ವ್ಯಾಖ್ಯಾನಿಸಲಾದ ನಮ್ಮ RF ನೀತಿಗಳನ್ನು ಆಧರಿಸಿದೆ ( ನೀತಿಗಳು.htm). TEMFJ ಅನ್ನು ಕಿರಿದಾದ ಬ್ಯಾಂಡ್‌ವಿಡ್ತ್‌ನಲ್ಲಿ ದ್ವಿದಳ ಧಾನ್ಯಗಳ ತಂತಿಗಳನ್ನು ಕಳುಹಿಸಲು ವಿನ್ಯಾಸಗೊಳಿಸಲಾಗಿದೆ (ಆಯ್ಕೆ ಮಾಡಿದ ಕೇಂದ್ರ ಆವರ್ತನ 1MHz - 3GHz; BW 0.1% ಸೆಂಟರ್ ಫ್ರೀಕ್ ಅಥವಾ 10KHz, ಯಾವುದು ಶ್ರೇಷ್ಠವೋ ಅದು) ಜಾಮ್ (ಒಬ್ಬರ ದೇಹದ ತಕ್ಷಣದ ಪ್ರದೇಶದಲ್ಲಿ) ಇಎಮ್ ಟ್ರಾನ್ಸ್‌ಮಿಟರ್‌ಗಳನ್ನು ಅಪರಾಧ ಮಾಡಲು ವಿನ್ಯಾಸಗೊಳಿಸಲಾಗಿದೆ. , ಕಣ್ಗಾವಲು ಸಾಧನಗಳು, ಮೈಕ್ರೊವೇವ್ ನಿಯಂತ್ರಕಗಳು ಮತ್ತು ಇತರರು - ಹೊಸ EM ಸಾಧನಗಳು ಸಹ. ಪೋರ್ಟಬಲ್ ಮತ್ತು ಧರಿಸಲಾಗುತ್ತದೆ ಅಥವಾ ದೇಹದ ಮೇಲೆ ಅಥವಾ ಹತ್ತಿರ ಸಾಗಿಸಲಾಗುತ್ತದೆ. ಇಎಮ್ ಸಿಗ್ನಲ್ ಜ್ಯಾಮರ್‌ಗಳನ್ನು ಎಲೆಕ್ಟ್ರಾನಿಕ್ ಆಯುಧಗಳಾಗಿ ಕಾರ್ಯನಿರ್ವಹಿಸಲು ಅಥವಾ ಕಾನೂನುಬದ್ಧವಾಗಿ ಪರವಾನಗಿ ಪಡೆದ ಟ್ರಾನ್ಸ್‌ಮಿಟರ್‌ಗಳನ್ನು ಜ್ಯಾಮ್ ಮಾಡಲು ವಿನ್ಯಾಸಗೊಳಿಸಲಾಗಿಲ್ಲ ಎಂಬುದನ್ನು ಗಮನಿಸಿ. ಜಾಮರ್‌ಗಳು ಯಾವುದೇ ಬುದ್ಧಿವಂತಿಕೆಯನ್ನು ರವಾನಿಸುವುದಿಲ್ಲ ಆದರೆ ಎಲೆಕ್ಟ್ರಾನಿಕ್ ಆಯುಧದ ಆಕ್ಷೇಪಾರ್ಹ ಸಂಕೇತಗಳನ್ನು ಮರೆಮಾಚಲು ಬಿಳಿ ಶಬ್ದ ಅಥವಾ ಗುಲಾಬಿ ಶಬ್ದದಿಂದ ಸಾಮಾನ್ಯವಾಗಿ ಮಾಡ್ಯುಲೇಟ್ ಮಾಡಲಾದ ಹೆಚ್ಚಿನ ಆವರ್ತನ ವಾಹಕ ಸಂಕೇತವನ್ನು ಮಾತ್ರ ರವಾನಿಸುತ್ತದೆ (ನೀವು EM ಬಿಳಿ ಶಬ್ದವನ್ನು ಕೇಳಿದರೆ, ಅದು ದೂರದ ಮಳೆಯಂತೆ ಧ್ವನಿಸುತ್ತದೆ; EM ಗುಲಾಬಿ ಶಬ್ದವು ಬಿಳಿ ಶಬ್ದವನ್ನು ಹೋಲುತ್ತದೆ ಆದರೆ ಫಿಲ್ಟರಿಂಗ್ ಅನ್ನು ಅವಲಂಬಿಸಿ ಹೆಚ್ಚಿನ ಅಥವಾ ಕಡಿಮೆ ಸಂಯೋಜಿತ ಪಿಚ್ ಅನ್ನು ಹೊಂದಿರುತ್ತದೆ). ಇದಕ್ಕೆ ವ್ಯತಿರಿಕ್ತವಾಗಿ, ಎಲೆಕ್ಟ್ರಾನಿಕ್ ಟ್ರಾನ್ಸ್‌ಮಿಟರ್ ಆಯುಧಗಳು ನಿರ್ದಿಷ್ಟ ನಿಯಂತ್ರಣ ಸಂಕೇತಗಳು ಅಥವಾ ಡೇಟಾ ಸಂಕೇತಗಳನ್ನು ರವಾನಿಸುತ್ತವೆ, ಇವುಗಳನ್ನು ಸಾಮಾನ್ಯವಾಗಿ ವ್ಯಕ್ತಿ(ಗಳು) (ಸಾಮಾನ್ಯವಾಗಿ ಉದ್ದೇಶಿತ ವ್ಯಕ್ತಿ), ಪ್ರಾಣಿ(ಗಳು) ಮತ್ತು/ಅಥವಾ ಉಪಕರಣಗಳಲ್ಲಿ ಹಾನಿಕಾರಕ ಅಭಿವ್ಯಕ್ತಿಗಳನ್ನು ಉಂಟುಮಾಡಲು ವಿನ್ಯಾಸಗೊಳಿಸಲಾಗಿದೆ. ಹಾನಿಕಾರಕ EMF ಗಳು ಆಕ್ರಮಿಸಬಹುದಾದ ಬ್ಯಾಂಡ್‌ವಿಡ್ತ್ ಅಗಾಧವಾಗಿರುವುದರಿಂದ, ಈ ಅಗಾಧವಾದ ವಿದ್ಯುತ್ಕಾಂತೀಯ ಸ್ಪೆಕ್ಟ್ರಮ್‌ನಲ್ಲಿ ನಿಮಗೆ ಹಾನಿಕಾರಕ ಸಂಕೇತಗಳು ಎಲ್ಲಿವೆ ಎಂಬುದನ್ನು ನಿರ್ಧರಿಸುವುದು ಮುಖ್ಯವಾಗಿದೆ. ಆದ್ದರಿಂದ, ನೀವು ಮೊದಲು ಕಸ್ಟಮೈಸ್ ಮಾಡಿದ ಸಾಧನವಾಗಿ ಡೈರೆಕ್ಷನಲ್ ಸಿಗ್ನಲ್ ಸಾಮರ್ಥ್ಯ ಅಥವಾ ಸಿಗ್ನಲ್ ತ್ರಿಕೋನ ಸಾಧನದ ಖರೀದಿಯನ್ನು ಬಲವಾಗಿ ಪರಿಗಣಿಸಬೇಕು ಇದರಿಂದ ನೀವು ಆಕ್ಷೇಪಾರ್ಹ ಸಿಗ್ನಲ್‌ಗಳನ್ನು ರೆಡ್-ಹ್ಯಾಂಡ್‌ನಿಂದ ಹೊರತೆಗೆಯಬಹುದು, ಅವುಗಳ ಆವರ್ತನ(ಐಎಸ್) (ಬ್ಯಾಂಡ್‌ವಿಡ್ತ್)[5.5 ಕೆ.ಜಿ.]
    ನಮ್ಮ ಲ್ಯಾಬ್ ಲಿಂಕ್ ಇಲ್ಲಿದೆ https://sandria.company.site/

    ReplyDelete